ಅಲೆಮಾರಿಗೆ ಊರ ಜಾತ್ರೆಯ ಸಂಭ್ರಮ .ಕಣಿಪುರದ ಗೋಪಾಲಕೃಷ್ಣನಿಗೆ ಜನವರಿ 14 ರಿಂದ18ರವರೆಗೆ ಉತ್ಸವ (ಕಾಸರಗೋಡು ಜಿಲ್ಲೆಯ ಕುಂಬಳೆಯ ಪ್ರಸಿದ್ದ ದೇವಸ್ಥಾನಗಳಲ್ಲಿ ಒಂದು )ಕೃಷ್ಣನ ಜಾತ್ರೆಯೆಂದರೆ ಇಡೀಯ ಊರಿಗೆ ಊರೆ,ಸಂಭ್ರಮಿಸುತ್ತದೆ.ಕುಂಬಳೆಯ ನಗರದಲ್ಲಿ 5ದಿನ ಜಾತಿ ಮತ ಭೇದವಿಲ್ಲದ ಸಂತೋಷ.ಎಲ್ಲರ ಬಾಯಲ್ಲು ಪಿಳ್ಳಂಗೋವಿಯ ಸ್ಮರಣೆ, ಕೊಡಿಯಿಂದ(ಜಾತ್ರೆಯ ಆರಂಭದ ದಿನ)ಆರಾಟ್ ವರೆಗೂ(ಕೊನೆ ದಿನ)....ಬೆಡಿ(ಪಟಾಕಿ ಸೇವೆ) ಇದು ನಮ್ಮೂರಿನ ಜಾತ್ರೆಯ ವಿಷೇಶ,ಉತ್ಸವ ಆರಂಭವಾಗಿ ನಾಲ್ಕನೆ ದಿನ ರಾತ್ರಿ ಈ ಸೇವೆ ನಡೆಯುತ್ತದೆ.ಇದು ಕುಂಬಳೆ ಬೆಡಿಯೆಂದು ಊರು ಪರವೂರಲ್ಲಿ ಪ್ರಖ್ಯಾತಿ ಪಡೆದಿದೆ.ಸುಮಾರು 2ರಿಂದ3ಲಕ್ಷ ರೂ ಮೊತ್ತದ ಬಗೆ,ಬಗೆಯ ಪಟಾಕಿಯನ್ನು 2ಗಂಟೆಗಳ ಕಾಲ ಸಿಡಿಸಿ ಸಂತೋಷಿಸುವುದು ಇದರ ವಿಷೇಷ.ಸಹ್ರಾರು ಜನಗಳು ಈ ಸಂಭ್ರಮಕ್ಕೆ ಸಾಕ್ಷಿಯಾಗುತ್ತಾರೆ. ಅಲ್ಲದೆ ಪ್ರತಿದಿನ ನಡೆಯುವ ಸಾಂಸ್ಕೃತಿಕ ಹಾಗೂ ಅನ್ನದಾನ ಕಾಯ್ರಕ್ರಮ ಜಾತ್ರೆಗೆ ಇನ್ನಷ್ಟು ಮೆರಗು ನೀಡಿತ್ತದೆ.
ಅಲೆಮಾರಿ..

- ಮಾಧವ ಹೊಳ್ಳ
- kasaragod, kerala, India
- If you want love, be lovable.Give more to other,expect less from other.
ಶುಕ್ರವಾರ, ಜನವರಿ 21
ಮಂಗಳವಾರ, ಜನವರಿ 4
ಅಲೆಮಾರಿಯ ಮೊದಲಮಾತು
ಅಂತು,ಇಂತು ಕಡೆಗೂ ಬ್ಲಾಗು ಮಾಡಿಯೆ ಬಿಟ್ಟೆ.ಅಲ್ಲಿಗೆ ನನ್ನ ವಿಲಾಸಿ ಜೀವನಕ್ಕೆ ಸದ್ಯಕ್ಕೆ ಒಂದು ವಿಹಾರ ಕೇಂದ್ರ ಸಿಕ್ಕಿತು.ಇದು ಈ ವಿಲಾಸಿಯ ಹಲವಾರು ವರುಷದ ಸಾಧನೆ..ನಿತ್ಯ ತಪಸ್ಸು...ಇದನ್ನು ಯಾವತ್ತೋ ನಾನು ಮಾಡಬೇಕಿ್ತ್ತು..ಆದ್ರೆ ನನ್ನ ಆಪ್ತಮಿತ್ರ ನಂಗೆ ಅಡ್ಡಿ ಮಾಡಿದ ಇಷ್ಡು ದಿನ ..ಹಲವು ಬಾರಿ ಅವನನ್ನು ಕೇಳದೆ ಬ್ಲಾಗು ಮಾಡಲು ಹೊರಟೆ ಆದ್ರೆ ಅದು ಹ್ಯಾಗೆ ಅವನಿಗೆ ಗೊತ್ತಾಗೊತ್ತೊ ತಿಳಿಯದು,ನನ್ನ ಪ್ರಯತ್ನಕ್ಕೆಲ್ಲಾ ಅಡ್ಡಗಾಲು ಹಾಕುತಿದ್ದ..ಕೊನೆಗೆ ಈ ಬಾರಿ ನಾನೆ ಗೆದ್ದೆ ನಾನು ಬ್ಲಾಗು ಮಾಡಿಯೆ ಬಿಟ್ಟೆ ..ಅವನಿಗೂ ಇದುವರೆಗೆ ಗೊತ್ತಾಗಲಿಲ್ಲ,ಸದ್ಯಕ್ಕೆ ಗೊ್ತ್ತಾಗುವುದು ಇಲ್ಲ ..ಅರೆ ಇಷ್ಡೆಲ್ಲಾ ಹೇಳಿಯಾಯಿತು ನನ್ನ ಗೆಳೆಯನ ಹೆಸರೆ ಹೇಳಲಿಲ್ವ..ಆ ಪರಾಕ್ರಮಿ ಬೇರೆಯಾರು ಅಲ್ಲ ,ಅವನು ನಿಮ್ಮೊಟ್ಟಿಗೂ ಕೆಲವೊಮ್ಮೆ ಇರುತ್ತಾನೆ ,ಅವನೇರಿ..' ಊದಸೀನ' "ಆಲಸ್ಯ ".ಅವನು ನಿಮ್ಮೊಟ್ಟಿಗೆಯಾವಾಗಲಾದರ್ರು ಇದ್ರೆ ..ನನ್ನೊಟ್ಟಗೆ ಫು್ಲ್ಲ ಟ್ಟೆಮ್ ಇರ್ತಾನೆ..ಸದ್ಯ ಈ ಸಲ ನಾನು ತಪ್ಪಿಸಿ ಕೊಂಡಿದ್ದೇನೆ, ಮತ್ತೊಮ್ಮೆ ಅವನಿಗೆ ಈ ವಿಷಯ ಗೊತ್ತಾಗುವರೆಗೆ ನಾನು ಈ ವಿಲಾಸಿ-ವಿಹಾರದಲ್ಲಿ ಇರುತ್ತೇನೆ.ನಿಮ್ಮೊಂದಿಗೆ..
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)