ಅಲೆಮಾರಿ..

ನನ್ನ ಫೋಟೋ
kasaragod, kerala, India
If you want love, be lovable.Give more to other,expect less from other.

ಶುಕ್ರವಾರ, ಜನವರಿ 21

ನಮ್ಮೂರ ಜಾತ್ರೆ ಚಂದವೊ...ಚೆಂದ..








ಅಲೆಮಾರಿಗೆ ಊರ ಜಾತ್ರೆಯ ಸಂಭ್ರಮ .ಕಣಿಪುರದ ಗೋಪಾಲಕೃಷ್ಣನಿಗೆ ಜನವರಿ 14 ರಿಂದ18ರವರೆಗೆ ಉತ್ಸವ (ಕಾಸರಗೋಡು ಜಿಲ್ಲೆಯ ಕುಂಬಳೆಯ ಪ್ರಸಿದ್ದ ದೇವಸ್ಥಾನಗಳಲ್ಲಿ ಒಂದು )ಕೃಷ್ಣನ ಜಾತ್ರೆಯೆಂದರೆ ಇಡೀಯ ಊರಿಗೆ ಊರೆ,ಸಂಭ್ರಮಿಸುತ್ತದೆ.ಕುಂಬಳೆಯ ನಗರದಲ್ಲಿ 5ದಿನ ಜಾತಿ ಮತ ಭೇದವಿಲ್ಲದ ಸಂತೋಷ.ಎಲ್ಲರ ಬಾಯಲ್ಲು ಪಿಳ್ಳಂಗೋವಿಯ ಸ್ಮರಣೆ, ಕೊಡಿಯಿಂದ(ಜಾತ್ರೆಯ ಆರಂಭದ ದಿನ)ಆರಾಟ್ ವರೆಗೂ(ಕೊನೆ ದಿನ)....ಬೆಡಿ(ಪಟಾಕಿ ಸೇವೆ) ಇದು ನಮ್ಮೂರಿನ ಜಾತ್ರೆಯ ವಿಷೇಶ,ಉತ್ಸವ ಆರಂಭವಾಗಿ ನಾಲ್ಕನೆ ದಿನ ರಾತ್ರಿ ಈ ಸೇವೆ ನಡೆಯುತ್ತದೆ.ಇದು ಕುಂಬಳೆ ಬೆಡಿಯೆಂದು ಊರು ಪರವೂರಲ್ಲಿ ಪ್ರಖ್ಯಾತಿ ಪಡೆದಿದೆ.ಸುಮಾರು 2ರಿಂದ3ಲಕ್ಷ ರೂ ಮೊತ್ತದ ಬಗೆ,ಬಗೆಯ ಪಟಾಕಿಯನ್ನು 2ಗಂಟೆಗಳ ಕಾಲ ಸಿಡಿಸಿ ಸಂತೋಷಿಸುವುದು ಇದರ ವಿಷೇಷ.ಸಹ್ರಾರು ಜನಗಳು ಈ ಸಂಭ್ರಮಕ್ಕೆ ಸಾಕ್ಷಿಯಾಗುತ್ತಾರೆ. ಅಲ್ಲದೆ ಪ್ರತಿದಿನ ನಡೆಯುವ ಸಾಂಸ್ಕೃತಿಕ ಹಾಗೂ ಅನ್ನದಾನ ಕಾಯ್ರಕ್ರಮ ಜಾತ್ರೆಗೆ ಇನ್ನಷ್ಟು ಮೆರಗು ನೀಡಿತ್ತದೆ.