ಅಲೆಮಾರಿ..

ನನ್ನ ಫೋಟೋ
kasaragod, kerala, India
If you want love, be lovable.Give more to other,expect less from other.

ಭಾನುವಾರ, ಆಗಸ್ಟ್ 5

ಕವನ...

''ಅದ್ಯಾಕೋ ಗೊತ್ತಿಲ್ಲ ಕಳೆದ ಎರಡು ಮೂರು ತಿಂಗಳಿಂದ, ಭೂಮಿಯಂತೆ ನಾನು ಬರಡಾಗಿದ್ದೆ. ನನ್ನಲ್ಲಿ ಕತೆಯೇ ಮೂಡಲಿಲಲ್ಲ, ಕವಿತೆ ಕಾಡಲೇ ಇಲ್ಲ, ಬರೆಯಬೇಕಿನಿಸಲೇ ಇಲ್ಲ, ಬರೀಯ ಜೀವನ ಲೆಕ್ಕಾಚಾರದಲ್ಲೇ ಮುಗಿಯಿತು ದಿನಗಳು.  ಬಳಲಿ ಬೆಂಡಾಗಿ ಹೊಸ ಮಳೆಗಾಗಿ ಕಾಯತ್ತಿರುವ ಭೂರಮೆಯಂತೆ ನಾನು ಬಿಡುಗಡೆಗೆ ಕಾಯುತ್ತಿದ್ದೆ. ಹೊಸತೇನಕ್ಕೋ ಹೊರಟಿದ್ದೆ, ಆದ್ರೆ ವಿರ್ಪಯಾಸ ಅಂದ್ರೆ ಅಲ್ಲಿ ಹೊಸತನ ಕಾಣಲೇ ಇಲ್ಲ , ಬದಲಾಗಿ ಕಂಡಿದ್ದು ಬಂಜರು ನಾಡು ಮತ್ತು ಅದೇ ಹಳೆ ರಾಗ. ಇನ್ನು ಬಂಜರು ನಾಡಲ್ಲಿ ಬೆಳೆ ತೆಗೆಯುವಷ್ಟು ದೊಡ್ಡವನಾಗಲಿಲ್ಲ ನಾನು ಅಂತ ಅನ್ಸ್ತು, ಹಾಗಾಗಿ ನನ್ನ ಕವಿತೆ, ಕಥೆ, ಸಿನಿಮಾ, ಪ್ರಕೃತಿ ಇದ್ಯಾವುದು ಇಲ್ಲದ, ನೀಡದ ಆ ಬರಡು ನಾಡಿಗೆ ನನ್ನ ದೊಡ್ಡ  'ಸಲಾಂ', ಈ ಕವಿತೆಗಳ ಮೂಡಿಸಿದಕ್ಕೆ.''

    ಸೋಲಿನ ಕವಿತೆ
ಮನಸ್ಸಿಗೇನು ಹುಚ್ಚು ಹಠ, ಅನ್ನಿಸ್ಸಿದ್ದನ್ನು
ಹೇಳಿ ಬಿಡುತ್ತದೆ ಹಾಗೆ ಸುಮ್ಮನೆ.
ಮೊದಲೇ ನಾನೊಬ್ಬ ಅಲೆಮಾರಿ
ವಿಲಾಸಿತನವೇ ನನ್ನ ಕನಸು
ಆ ಸ್ವಪ್ನವೇ ನನ್ನ ಸುಂದರ ಬದುಕು.

ಅದಕ್ಕೆ ನಾ ಯಾವತ್ತು
ಮನಸ್ಸಿನ ಸಂಚಾರಿ , ಅಲೆಮಾರಿ
ಮನದ ಮಾತೆ ನನ್ನ ಜೀವಾಳ
ಮನದ ಹಂಬಲವೇ ನನ್ನ ಸ್ಪೂರ್ತಿ.

ಅದಕ್ಕೆ ನಾ ಪ್ರತಿ ಸಲ
ಸೋಲುತ್ತೇನೆ ಕ್ಷಣ... ಕ್ಷಣ...
ಆದರೂ ಖುಷಿಯೇ, ಅದು ಹಾಗೇನೆ
ಆ ಸೋಲಿನ ಸಂತಸವೇ ನನಗೆ
ಹೀಗೆ ಚಿಗುರೊಡೆವ ಕವಿತೆ ಮೂಡಿಸುತ್ತೆ.



ಹೀಗೊ(ಒ)ಂದು ಪಯಣ

ಅದೇ ಹಾದಿ ಅದೇ ಪಯಣ
ಬೇಕಾದ್ದನ್ನು ಪಡೆಯದೇ  ಬೇಡದ್ದನ್ನು
ಎರವಾಗಿಸಿ ಮೌನವಾಗಿ ಸಾಗುವ
ನಿರ್ಮಲ, ನಿರಾತಂಕ ಪಯಣ...

ಮತ್ತೇ ಬೇಕೆನಿಸುತಿದೆ , ಕಾಡುತಿದೆ
ಆ ಚಂದ್ರನ ಅರಮನೆಯಲ್ಲಿ
ಮೂಡಿದ ಆ ಒಂಟಿ ಪ್ರೀತಿ...
ಆದರೆ  ಬಿಡುತ್ತಿಲ್ಲ  ವಾಸ್ತವ
ಆ ಒಂಟಿ ಪ್ರಣಯಕೆ.

ಹಾಗಿದ್ದರು ನಾನಿದ್ದೇನೆ ಹುಡುಕಾಟದಲಿ
ಅಳಿದು ಹೋದ ಆ ಅನಂತ ನಿಶೆಯಲಿ
ಬಾಳದಾರಿಯ  ಒಂಟಿ ಪಯಣದಲಿ.


ತೃಣ ಭಾವ
ಅಣತಿ ದೂರದಲ್ಲಿನ ತೃಣ ಮಾತ್ರ ಹುಲ್ಲು
ಮುಂಜಾನೆಯ ಎಳೆ ಬಿಸಿಲಿಗೆ ಹೊಳೆಯುತ್ತಿತ್ತು
ದಿನವಿಡೀ ಬಿರು ಬೇಗೆಗೆ ಬೆಂದ ಹುಲ್ಲು
 ನಿಶೆಯಲ್ಲಿನ ಮಂಜಿನ ಹನಿಯ
ಮೃದು ಸ್ಪರ್ಶಕೆ ಮೈದಳೆದಿತ್ತು.
ಮತ್ತೇ ಸೋಕುವ ಹಸಿ ಬಿಸಿಲಿಗೆ.
ಮೆಲ್ಲನೆ...ಮಂಜಿನ ಹನಿಯೊಂದಿಗೆ
ಹೊಳೆಯುತ್ತಿತ್ತು... ಹೊಸ ಆಸೆಯೊಂದಿಗೆ.
ಅರಿವಿಲ್ಲ ಹುಲ್ಲಿಗೆ ಇದುವೇ ತನ್ನ
ಬದುಕ ಕೊನೆಯ ದಿನವೆಂದು.
ಮೈದಳೆದಿದೆ ಹುಲ್ಲು ಮತ್ತೆ
ಬಿಸಿಲಿಗೆ ಮೈಯೊಡ್ಡಲು...ಮತ್ತೆ
ರಾತ್ರೆಯ ಮಂಜಿನ ಹನಿಯ
ಸ್ಪರ್ಶ ಸುಖ ಸವಿಯಲು.
ಅಲೆಮಾರಿ