ಮಳೆ ಈ ಸಲ ಭೂಮಿಯ ಮೇಲೆ ಕೋಪಿಸಿದಂತಿದೆ, ಸಂಪ್ರದಾಯದಂತೆ ಬರಬೇಕಾದ ಮಳೆ ಅದೆಷ್ಟೋ ಲೇಟಾಗಿ ಬಂದು ಹೋಗಿದೆ. ಆಧುನಿಕತೆಯ ಗುಂಗಿನಲಿ ಮುಳುಗಿದ್ದವರಿಗೆಲ್ಲಾ ಇದ್ರರಿಂದ ಒಮ್ಮೆ ಚಾಟಿ ಏಟಿ ಬೀಸಿದಂತಾಗಿದೆ. ಎಲ್ಲವೂ ನಮ್ಮಿಂದ ಸಾದ್ಯ ಅಂತ ಬೀಗುತ್ತಿದ್ದ ಉತ್ತಮ ನಾಗರಿಕರಿಗೆ, ಪ್ರಕೃತಿ ಶಕ್ತಿ ಏನು ಅನ್ನೋದನ್ನ ತೋರಿಸಿಕೊಟ್ಟದೆ. ಪ್ರಕೃತಿ ಅಸ್ತಿತ್ವದ ನಡುವೆ ಮಾನವರು ಏನೂ ಅಲ್ಲ ಅನ್ನೊದನ್ನ ಮತ್ತೆ ಸಾರಿ ಹೇಳಿದೆ. ಆದ್ರೂ ನಾಗರಿಕರ ಮತ್ತು ಇಳಿಯಲಿಲ್ಲ. ಆದ್ರೆ ಪಾಪ ಭೂ ತಾಯಿ ತನ್ನ ಮಕ್ಕಳಿಗೆ ಕ್ಷಮಿಸುತ್ತಾ ಬಂದಿದ್ದಾಳೆ, ಎಷ್ಟಾದರೂ ಅಮ್ಮ ಅಲ್ವೆ. ಅಂತಹ ತಾಯಿಗೆ ಮಕ್ಕಳ ಒಡುಗರೆಯಂತೂ ಸಹಿಲಾರದಷ್ಟು ಕಠಿಣ, ಆದ್ರೂ ತಾಯಿ ಮಕ್ಕಳಿಗೆ ಯಾವತ್ತೂ ಯಾವುದಕ್ಕೂ ಕಡಿಮೆ ಮಾಡಿರಲಿಲ್ಲ, ಈ ಸಲ ಮಾತ್ರ ಆ ತಾಯಿಯೊಂದಿಗೆ ಮಳೆಯೇ ಕೋಪಿಸಿದಂತಿದೆ. ಭೂತಾಯಿ ಧರ್ಮ ಸಂಕಟದಲ್ಲಿದ್ದಾಳೆ, ಅವಳಿಗೆ ಅದು ನಿಶ್ಚಿತವಾಗಿ ಗೊತ್ತು ಈ ಸಲ ಮಳೆ ತನ್ನ ಮಕ್ಕಳ ತಪ್ಪಿಗೆ ಕೋಪಕೊಂಡಿದೆ, ತನ್ನ ಮಕ್ಕಳು ಮಾಡಿದ, ತಪ್ಪನ್ನು ಮತ್ತೆ, ಮತ್ತೆ ಮಾಡಿ ಮಳೆ ಮುನಿಸುವಂತೆ ಮಾಡಿದ್ದಾರೆ ಅನ್ನುವುದು. ಹಾಗಾದ್ರು ಭೂತಾಯಿ ತನ್ನ ಮಕ್ಕಳನ್ನು ಬಿಟ್ಟು ಕೊಡ್ಲಿಲ್ಲ, ಕಾಡಿ ಬೇಡಿ ಸ್ವಲ್ಪ ಲೇಟಾದ್ರು ಮಳೆ ಬರಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಆದ್ರೂ ತನ್ನ ಮನಸ್ಸಲ್ಲಿ ದುಗುಡ ಇನ್ನೂ ಹಾಗೆ ಇದೆ, ಎಲ್ಲಿ ತನ್ನ ಮಕ್ಕಳು ಮತ್ತೆ ತಪ್ಪು ಮಾಡುತ್ತಾರೆ, ಮತ್ತೆ ಎಲ್ಲಿ ಮಳೆ ತನ್ನ ಮೇಲೆ ಕೋಪಿಸುತ್ತದೆ ಅನ್ನೋ ಭಯ ಅವಳಿಗೆ ಇತ್ತೀಚೆಗಿಂದ ಕಾಡುತ್ತಿದೆ. ಇಷ್ಟಾದರೂ ತಾಯಿಯ ಮಕ್ಕಳು ಮಾತ್ರ ಇದ್ಯಾವುದ್ರ ಪರಿವೇ ಇಲ್ಲದೇ ವಿಕೃತದಲ್ಲಿ ತೊಡಗಿದ್ದಾರೆ.
ಭೂ 'ಸಂಕಟ'
ಹನಿಯೊಂದು ಕೊಟ್ಟಿತು ಮುತ್ತನು
ಮಳೆಯ ಹನಿಯೊಂದು ಕೊಟ್ಟಿತು
ಮುತ್ತೊಂದನು...ಬಿರಿದ ಭುವಿಯ
ತುಟಿಗೆ... ಒಡೆದ ತುಟಿಗೆ...
ಸುರಿದವು ಹನಿಗಳು ಮೆಲ್ಲಗೆ
ಸುರಿದವು ಮಳೆಯ ಹನಿಗಳು
ಒಡೆದ ಇಳೆಯ ಒಡಲಿಗೆ
ಸೋಕಿದೆ ಹನಿಗಳು ಚಿಮ್ಮುತ
ಸೋಕಿದೆ ಮಳೆಯ ಹನಿಗಳು
ಕೋಪವ ಮರೆತು, ಹಠವ ಬಿಟ್ಟು
ಮಳೆ ನೀಡಿದೆ ಇಳೆಗೆ ಮುತ್ತುಗಳನು
ಕೇಳಿದೆ ಭುವಿ ಕ್ಷಮೆಯನು
ಸಾರಿ, ಸಾರಿ ಕೇಳಿದೆ ಕ್ಷಮೆಯನು
ಮಳೆಯೊಡನೆ, ತನ್ನ ಮಕ್ಕಳ ತಪ್ಪಿಗೆ
ಮಕ್ಕಳೇನೋ $$$ ಇದಾರೆ ಅಹಂಕಾರದಲಿ
ಉತ್ತಮ ನಾಗರಿಕರ ಸೋಗಿನಲಿ, ಮತ್ತಿನಲಿ
ಮುನಿಸಿದ ಮಳೆ ಮಾತ್ರ ಸೋತಿದೆ
ಇಳೆಯ ಮುಗುದ ಒಲವಿಗೆ
ಮಳೆಯೂ $$$ ಕ್ಷಮಿಸಿದೆ ಇಳೆಗೆ
ಅವರೂ ನನ್ನದೇ ಮಕ್ಕಳೆಂದು...
ಆದರೂ ಭುವಿಯ ಮನದೊಳಗೆ
ತುಮುಲ...ಹೊಯ್ದಾಟ...
ಮತ್ತೆ ಮಕ್ಕಳು ತಪ್ಪು ಮಾಡದಿರಲಾರರು
ಮಳೆ ಮತ್ತೆ ಕೋಪಿಸದೆ ಇರದು ಅಂತ.
ಮಳೆಯ ಹನಿಯೊಂದು ಕೊಟ್ಟಿತು
ಮುತ್ತೊಂದನು...ಬಿರಿದ ಭುವಿಯ
ತುಟಿಗೆ... ಒಡೆದ ತುಟಿಗೆ...
ಸುರಿದವು ಹನಿಗಳು ಮೆಲ್ಲಗೆ
ಸುರಿದವು ಮಳೆಯ ಹನಿಗಳು
ಒಡೆದ ಇಳೆಯ ಒಡಲಿಗೆ
ಸೋಕಿದೆ ಹನಿಗಳು ಚಿಮ್ಮುತ
ಸೋಕಿದೆ ಮಳೆಯ ಹನಿಗಳು
ಕೋಪವ ಮರೆತು, ಹಠವ ಬಿಟ್ಟು
ಮಳೆ ನೀಡಿದೆ ಇಳೆಗೆ ಮುತ್ತುಗಳನು
ಕೇಳಿದೆ ಭುವಿ ಕ್ಷಮೆಯನು
ಸಾರಿ, ಸಾರಿ ಕೇಳಿದೆ ಕ್ಷಮೆಯನು
ಮಳೆಯೊಡನೆ, ತನ್ನ ಮಕ್ಕಳ ತಪ್ಪಿಗೆ
ಮಕ್ಕಳೇನೋ $$$ ಇದಾರೆ ಅಹಂಕಾರದಲಿ
ಉತ್ತಮ ನಾಗರಿಕರ ಸೋಗಿನಲಿ, ಮತ್ತಿನಲಿ
ಮುನಿಸಿದ ಮಳೆ ಮಾತ್ರ ಸೋತಿದೆ
ಇಳೆಯ ಮುಗುದ ಒಲವಿಗೆ
ಮಳೆಯೂ $$$ ಕ್ಷಮಿಸಿದೆ ಇಳೆಗೆ
ಅವರೂ ನನ್ನದೇ ಮಕ್ಕಳೆಂದು...
ಆದರೂ ಭುವಿಯ ಮನದೊಳಗೆ
ತುಮುಲ...ಹೊಯ್ದಾಟ...
ಮತ್ತೆ ಮಕ್ಕಳು ತಪ್ಪು ಮಾಡದಿರಲಾರರು
ಮಳೆ ಮತ್ತೆ ಕೋಪಿಸದೆ ಇರದು ಅಂತ.
ಅಲೆಮಾರಿ