ಮುಗಿದ ಕತೆ
ಅಲ್ಲಿಗೆ ಕತೆ ಮುಗಿಯಿತು
ಕತೆಯುದ್ದಕ್ಕೂ ನಡೆದಿದೆ
ಅಸಂಖ್ಯ, ಅಲೌಕ್ಯ ಕಾಳಗ
ನಡೆದದ್ದು ಒಂಭತ್ತು ಅಕ್ಷೋಹಿಣಿ
ಕಾಳಗ...ಯುದ್ದೋನ್ಮಾದ
ಒಳಮನಸ್ಸಿಗೂ..ಪರಿಸ್ಥಿತಿಗು
ಈ ನಡುವೆಯೇ ಕತೆ ಕೊನೆಯಾಗಿದೆ
ಯುದ್ದವೂ ಮುಗಿದಿದೆ...
ಗೆದ್ದಿದ್ದು ಮನಸ್ಸೋ, ಪರಿಸ್ಥಿತಿಯೋ
ಇನ್ನೂ ನಾ ಅರಿಯೇ !
ಯುದ್ದಾರಂಭ ಪರಿಸ್ಥಿತಿಯ ಜಾಡು
ಮನಸ್ಸು ಬೆನ್ನಟ್ಟಿ ನಡೆದ ಕನಸು.
ಸಂಧಿಸಿದ ಅರಳಿ ಮರ
ಅರಳಿ ಮರದಗಲಕ್ಕೂ ರಣರಂಗ
ಅಶಾಂತ ಮನಸ್ಸು, ವಿಕೃತ ಪರಿಸ್ಥಿತಿ
ಅಲ್ಲಿಯೇ ಶುರು ಯುದ್ದ, ಮಹಾಯುದ್ದ
ನಡುವೆ ದೂರದಲ್ಲೆಲ್ಲೋ ’ಆ’ ಕನಸು
ಒಮ್ಮೆ ಮನಸ್ಸು, ಒಮ್ಮೊಮ್ಮೆ ಪರಿಸ್ಥಿತಿ
ಅತ್ತ ಅರಳದ ಗೆಲುವು, ಇತ್ತ ಮುದುಡದ ಸೋಲು
ವಿಪ್ಲವ ಭಾವ, ಅತೃಪ್ತ ಸ್ಥಿತಿ
ನಡುವೆ ಹೊಳೆಯುವ ’ಆ’ ಕನಸು
ಹೀಗೆಯೇ... ಯುದ್ದಮುಗಿದಿದೆ
ಗೆದ್ದದ್ದು ಮನಸೋ, ಕನಸೋ, ಪರಿಸ್ಥಿತಿಯೋ
ಕಾಡುವ ಈ ಸ್ಥಿತಿಯಲ್ಲಿಯೇ
ಹೊಳೆಯುವ ’ಆ’ ಕನಸಿಗೆ
ಮತ್ತೆ ಸಂಧಿಸಿದ ಅರಳಿಮರ
ಇಲ್ಲಿ ಮನಸ್ಸೋ, ಕನಸೋ, ಸ್ಥಿತಿಯೋ
ನಾ ಅರಿಯೇ...ಶುಭಾರಂಭವಷ್ಟೇ ಬಲ್ಲೆ..
ಅಲೆಮಾರಿ
ಗೆದ್ದಿದ್ದು ಮನಸ್ಸೋ, ಪರಿಸ್ಥಿತಿಯೋ ಎಂಬ ಪ್ರಶ್ನೆ ಸದಾ ಸುಳಿಯುತ್ತಿರುತ್ತದೆ! ವಿಪ್ಲವ ಭಾವಕು ಮೀರಿ ಶಾಂತವಾಗುವ ಕಾಲವೂ ಸನ್ನಿಹಿತ.
ಪ್ರತ್ಯುತ್ತರಅಳಿಸಿ