ಅಲೆಮಾರಿ..

ನನ್ನ ಫೋಟೋ
kasaragod, kerala, India
If you want love, be lovable.Give more to other,expect less from other.

ಬುಧವಾರ, ಸೆಪ್ಟೆಂಬರ್ 27

ಮತ್ತೆ ಬಂದಿರುವೆ

ಮತ್ತೆ ಬಂದಿರುವೆ ಪ್ರೇಮದೂರಿಗೆ
ಕನಸ ಊರಿನ ಜಗಲಿಯಲ್ಲಿ
ಅವಳಿಲ್ಲ ಈಗ ! ಅವಳಿಲ್ಲ
ಕನಸ ಊರ ತುಂಬೆಲ್ಲ ಹಸಿ ನೆನಪು
ಮನಸ್ಸು ತುಂಬಾ ಮಾಸದ ಪ್ರೀತಿ
ಊರ ತುಂಬೆಲ್ಲಾ ಕಾಡುವ ಮಳೆ
ಅವಳಿಲ್ಲ ಈಗ ! ಅವಳಿಲ್ಲ
ಕನಸ ಊರಿನ ಜಗಲಿಯಲ್ಲಿ
ನಾನೀಗ ಅಲೆಮಾರಿ, ಮನವೆಲ್ಲಾ ಖಾಲಿ, ಖಾಲಿ
ಕಣ್ಣನೆಯಿಸುವ ಪ್ರೀತಿ
ಅಣಕಿಸುವ ಮಳೆ ಹನಿ
ಹೊಂಬಿಸಲು ಗೆಳೆಯ
ತಂಗಾಳಿ ತಾಯಿ
ಅವಳಿಲ್ಲ ಈಗ ! ಅವಳಿಲ್ಲ
ಕನಸ ಊರಿನ ಜಗಲಿಯಲಿ

ಶುಕ್ರವಾರ, ನವೆಂಬರ್ 8

ಮುಗಿದ ಕತೆ

ಮುಗಿದ ಕತೆ

ಅಲ್ಲಿಗೆ ಕತೆ ಮುಗಿಯಿತು
ಕತೆಯುದ್ದಕ್ಕೂ ನಡೆದಿದೆ
ಅಸಂಖ್ಯ, ಅಲೌಕ್ಯ ಕಾಳಗ
ನಡೆದದ್ದು ಒಂಭತ್ತು ಅಕ್ಷೋಹಿಣಿ
ಕಾಳಗ...ಯುದ್ದೋನ್ಮಾದ
ಒಳಮನಸ್ಸಿಗೂ..ಪರಿಸ್ಥಿತಿಗು
ಈ ನಡುವೆಯೇ ಕತೆ ಕೊನೆಯಾಗಿದೆ
ಯುದ್ದವೂ ಮುಗಿದಿದೆ...
ಗೆದ್ದಿದ್ದು ಮನಸ್ಸೋ, ಪರಿಸ್ಥಿತಿಯೋ
ಇನ್ನೂ ನಾ ಅರಿಯೇ !

ಯುದ್ದಾರಂಭ ಪರಿಸ್ಥಿತಿಯ ಜಾಡು
ಮನಸ್ಸು ಬೆನ್ನಟ್ಟಿ ನಡೆದ ಕನಸು.
ಸಂಧಿಸಿದ ಅರಳಿ ಮರ
ಅರಳಿ ಮರದಗಲಕ್ಕೂ ರಣರಂಗ
ಅಶಾಂತ ಮನಸ್ಸು, ವಿಕೃತ ಪರಿಸ್ಥಿತಿ
ಅಲ್ಲಿಯೇ ಶುರು ಯುದ್ದ, ಮಹಾಯುದ್ದ
ನಡುವೆ ದೂರದಲ್ಲೆಲ್ಲೋ ’ಆ’ ಕನಸು

ಒಮ್ಮೆ ಮನಸ್ಸು, ಒಮ್ಮೊಮ್ಮೆ ಪರಿಸ್ಥಿತಿ
ಅತ್ತ ಅರಳದ ಗೆಲುವು, ಇತ್ತ ಮುದುಡದ ಸೋಲು
ವಿಪ್ಲವ ಭಾವ, ಅತೃಪ್ತ ಸ್ಥಿತಿ
ನಡುವೆ ಹೊಳೆಯುವ ’ಆ’ ಕನಸು
ಹೀಗೆಯೇ... ಯುದ್ದಮುಗಿದಿದೆ
ಗೆದ್ದದ್ದು ಮನಸೋ, ಕನಸೋ, ಪರಿಸ್ಥಿತಿಯೋ
ಕಾಡುವ ಈ ಸ್ಥಿತಿಯಲ್ಲಿಯೇ
ಹೊಳೆಯುವ ’ಆ’ ಕನಸಿಗೆ
ಮತ್ತೆ ಸಂಧಿಸಿದ ಅರಳಿಮರ
ಇಲ್ಲಿ ಮನಸ್ಸೋ, ಕನಸೋ, ಸ್ಥಿತಿಯೋ
ನಾ ಅರಿಯೇ...ಶುಭಾರಂಭವಷ್ಟೇ ಬಲ್ಲೆ..
     ಅಲೆಮಾರಿ

ಶನಿವಾರ, ಜೂನ್ 22

ಒಲವ ತೀರ


ಒಲವ ತೀರ

ಮರೆತಿದೆ ಒಲವು ತೀರವನ್ನ
ಅಡಗಿದೆ ನೆನಪು ಖಾಲಿ ಹಾಳೆಯ
ಮಡಚಿಟ್ಟ ಪುಟದ ನಡುವೆ
ಮುದುಡಿದೆ ಒಲವ ಪುಷ್ಪ
ಕಾಲಚಕ್ರದ ಕೈಯೊಳಗೆ
ಮನಸೆಲ್ಲಾ ಖಾಲಿ, ಖಾಲಿ
ನನ್ನೊಲವೆ ಮನಸೆಲ್ಲಾ, ಖಾಲಿ, ಖಾಲಿ..

ನನ್ನ ಎದೆಯ ತೀರಕೀಗ
ನಿನ್ನ ನೆನಪುಗಳ ಹಾವಳಿ..
ಇಲ್ಲಿಯೇ ಕೈ ಹಿಡಿದು ಏರಿದ್ದೆ ನೀ॒
ನನ್ನ ಹಾಯಿದೋಣಿಗೆ
ಮತ್ತೆಂದು ಹೋಗಲಾರೆಂದು.

ಹಾಯುತ್ತಿತ್ತು ದೋಣಿ ಮೆಲ್ಲನೆ
ನದಿಯ ಇನ್ನೊಂದು ತೀರಕೆ
ಅಲ್ಲೇ...ಒಲವ ತೀರದಲ್ಲಿ ನಿಂತಿದ್ದೆ
ನೀ ನನ್ನ ಚೆಲುವೆ, ಒಂಟಿಯಾಗಿ.

ಅದೇಕೋ ನಿನ್ನ ಕಣ್ಣಾಲಿಲೆಗಳು
ನನ್ನನ್ನೇ ಕೂಗಿ ಕರೆದಂತಿತ್ತು
ಮತ್ತೆ, ಮತ್ತೆ ಕೈ ಬೀಸಿ ಕರೆದಂತಿತ್ತು॒
ಸರಿಯಿತು ದೋಣಿ ಒಲವ ತೀರಕೆ
ನನಗರಿವಿಲ್ಲದೆ, ನಿನ್ನೆಡೆಗೆ...

ಕೈ ಚಾಚಿದೆ ನಾನು, ನಿನ್ನೆಡೆಗೆ ತೀರದಲಿ
ಏರಿದೆ ನೀ, ಮರು ಮಾತಿಲ್ಲದೆ
ಹಾಯಿ ದೋಣಿಯ ಒಂಟಿಯಾತ್ರೆಗೆ
ಮುಂದೆಲ್ಲಾ...ನವಿರು..ನವಿರು...

ಹೊಸ ಕನಸು, ಹೊಸ ಭಾವ, ಹೊಸ ಉನ್ಮಾದ
ಎಲ್ಲವೂ ಹೊಸತು ಆ ಯಾತ್ರೆಯಲಿ
ಕಳೆದು ಹೋದೆ ನಾ ಹಾಯಿ ದೋಣಿಯಲಿ
ಪ್ರೀತಿಯ ಉನ್ಮಾದದಲಿ, ಲಹರಿಯಲಿ
ನಿನ್ನ ಮೌನದೊಂದಿಗೆ

ಒಂಟಿ ನದಿ, ಹಾಯಿ ದೋಣಿ, ನಿನ್ನ ಮೌನ
ಮರೆತಿದ್ದೆ ನಾ ನನ್ನನ್ನೇ...
ಮರೆತಿದ್ದೆ ನಾ ಇನ್ನೊಂದು ತೀರವನ್ನ
ನದೀ ಮುಖದೀ ಸಾಗಿತ್ತು ಪಯಣ
ಎಲ್ಲಿಗೋ...ಎಲ್ಲಿಗೋ..

ಹಾಯಿ ದೋಣಿ ನೆನಪಿಸಿತ್ತು ಹಲವು ಬಾರಿ
ಮೈ ಮರೆತ ಮನವ
ಪೆದ್ದು ಮನವೆಲ್ಲಿ ಕೇಳಿತು ಅದನ
ಉನ್ಮಾದದಲಿ ಸಾಗಿತು ನನ್ನ ಮನ
ಬೆಳದಿಂಗಳ ನೀಲ ಬೆಳಕಲಿ
ಒಂಟಿ ನದಿಯ ದಾರಿಯಲಿ...

ಸರಿಯಿತು ದೋಣಿ ನನಗರಿವಿಲ್ಲದೆ
ರವಿಯೋದಯ ಆಗಸದಲಿ
ನಾನಿದ್ದೇ ಅವಳೇರಿದ ಒಲವ ತೀರದಲಿ
ಕಣ್ಣಲ್ಲೇ ಸೆಳೆದ ತೀರದಲಿ...
ಅವಳಿಲಿಲ್ಲದೆ ಹಾಯಿ ದೋಣಿಯಲಿ
ಕ್ಷಣವೆಲ್ಲಾ... ಮನಭಾರ..ಮನಭಾರ

ಅದೇಕೋ ನನ್ನಾವರಿಸಿದೆ
ಒಂಟಿಯಾತ್ರೆಯಲಿ..
ಅದೇಕೇರಿದೆ ನನ್ನ ಹಾಯಿ ದೋಣಿಗೆ
ಮತ್ತೆಂದು ಹೋಗಲಾರೆಂದು
ನೀ ನಿಲ್ಲದೆ ನಾ ಹೇಗೆ ಸಾಗಲಿ
ಹಾಯಿ ದೋಣಿಯ ಒಂಟಿಯಾತ್ರೆಯಲಿ

ನನ್ನೊಲವೇ...ಮನವೆಲ್ಲಾ ಖಾಲಿ..ಖಾಲಿ...
ಕಣ್ಮ್‌ಚ್ಚಿ ಕುಳಿತಿರುವೆನು
ಒಲವಿಂದ ಏರಿಬಿಡು ಮತ್ತೊಮ್ಮೆ
ನನ್ನ ಹಾಯಿದೋಣಿಗೆ ನಾನರಿಯದೆ...

                                              C¯ÉªÀiÁj

ಶನಿವಾರ, ಜೂನ್ 1

ಒಲವ ಓಲೆ


ಒಲವ ಓಲೆ  

ಹೊಸ ಅಲೆಯೊಂದು ಮೂಡಿದೆ
ಮಾಗಿದ ಮನಸ ತೀರದಲಿ
ಕನಸೊಡೆಯುತಿದೆ ಅದೇ ತೀರದಲಿ
ಒಲವೇ$$ ಮನಸೆಲ್ಲಾ ನವಿರು, ನವಿರು...
ಹೊಸ ಹುಣ್ಣಿಮೆ ರಾತ್ರಿಯಲಿ

ಹರಿದಿದೆ ಬೆಳಕು ತೀರದಲಿ
ಕನಸೊಂದಿಗೆ ನಿನ್ನ ಹೆಜ್ಜೆಯ ಮೇಲೆ,
ನಡೆಯ ಬೇಕು, ಆ ನಿನ್ನ ಹೆಜ್ಜೆ ಮೇಲೆ
ಪ್ರೀತಿಯಲಿ, ನಿನಗೊಪ್ಪುವಂತೆ

ಇಲ್ಲೇ ಈ ತೀರದಿ ಅರಿಯಬೇಕು
ಚಂದ್ರನಿರುತ, ಸೂರ್ಯ ಬರುತ
ನನ್ನ ನಲ್ಲೆ ನನ್ನೊಲವ
ಮತ್ತೆಂದು ನನ್ನ ಮರೆಯದಂತೆ
ಸೂರ್ಯ ಚಂದ್ರ ಸಾಕ್ಷಿಯಂತೆ.

ಅರಿಯೇ ನೀ ನನ್ನ ನಲ್ಲೆ
ಮನಸೆಲ್ಲಾ ನವಿರು, ನವಿರು
ಕರೆಯುತಿದೆ ತೀರ ಕೈ ಬೀಸಿ
ಸೇರಿ ಬಿಡು ನನ್ನನ್ನ
ಚಂದ್ರನಿರುವಂತೆ, ಸೂರ‍್ಯ ಬರುವಂತೆ.
                                                                                                         ಅಲೆಮಾರಿ

ಶುಕ್ರವಾರ, ಏಪ್ರಿಲ್ 19

ಬದುಕು-ರಂಗು


  
ಬದುಕು-ರಂಗು

 ಎಲ್ಲಿಯೋ ರಂಗೇರಿದ ಬದುಕು
ಕಳೆಯುವೆನು ಇನ್ನೆಲ್ಲಿಯೋ
ಕಂಡಿದ್ದ ಕನಸು; ಕೊನೆಯುಸಿರಿರುವ ತನಕ
      ಮಹಾತಾಯಿಯ; ಮಹಾಬದುಕು,
   ವಿಧಿಯೋ , ಬದುಕೋ...
ದಿನ ನಿತ್ಯ ಭಿಕ್ಷೆಯೇ ಕಾಯಕ
ನನ್ನಂತೆಯೆ ಇರುವ  ಧೀನರ ನಡುವೆ
ಒಡಲಲ್ಲಿ ಬಸುರ ಹೊತ್ತು
ಮಹಾತಾಯಿಯ ಕನಸ ಹೊತ್ತು

                                                                                       ಅಲೆಮಾರಿ

ಸೋಮವಾರ, ಫೆಬ್ರವರಿ 11

ನಿನ್ನೊಲುಮೆಯಿಂದಲೆ

ನಿನ್ನೊಲುಮೆಯಿಂದಲೆ

ಅರಿಯದಿರು , ಮರೆಯದಿರು
ಮತ್ತೊಮ್ಮೆ, ಮಗದೊಮ್ಮೆ
ಮಾಗಿದ ಒಲುಮೆಯ ನೆನಪುಗಳನ;
ಭಾವ, ಜೀವ ಸೆಲೆಯಾಗಿ
ಮೈದುಂಬಿ ಕಳೆದ ದಿನಗಳನ;
ಕ್ಷಮಿಸು , ಹಿಂತಿರುಗದಿರು
ಕ್ಷಮಿಸು, ಹಿಂತಿರುಗದಿರು
ಮತ್ತೊಮ್ಮೆ ಮೈದುಂಬಿ, ಸೋಕಿ
ಮಾಡದಿರು ಭಾವಸಖನಾಗಿ.
ಪರವಶನಾದೆ  ಆವತ್ತೆ$$$$
ಕಳೆದು ಹೋದೆ ಆವತ್ತೆ$$$$
ನಿನ್ನೊಲುಮೆಯಿಂದಲೆ.
                                                      ಅಲೆಮಾರಿ